ಚುನಾವಣಾ ಮಾಹಿತಿ ಪ್ಯಾನೆಲ್‌ಗಳು

ಚುನಾವಣಾ-ಸಂಬಂಧಿತ ಫೀಚರ್‌ಗಳು ಚುನಾವಣೆ ನಡೆಯುವ ಸಂದರ್ಭದಲ್ಲಿ ಸೀಮಿತ ದೇಶಗಳು/ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುತ್ತವೆ. ನಿರ್ದಿಷ್ಟ ಚುನಾವಣಾ ಸಂದರ್ಭಕ್ಕಾಗಿ ಲಭ್ಯವಿರುವ ಫೀಚರ್‌ಗಳಲ್ಲಿ ವ್ಯತ್ಯಾಸವಿರಬಹುದು.

ಚುನಾವಣಾ ಅಭ್ಯರ್ಥಿಗಳು, ಪಕ್ಷಗಳು ಅಥವಾ ಮತದಾನಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ನೀವು ಹುಡುಕಿದಾಗ ಅಥವಾ ವೀಕ್ಷಿಸಿದಾಗ ಮಾಹಿತಿ ಪ್ಯಾನೆಲ್‌ಗಳು ಕಾಣಿಸಬಹುದು. ಮಾಹಿತಿ ಪ್ಯಾನೆಲ್‌ಗಳು ಪಕ್ಷೇತರ, ಥರ್ಡ್-ಪಾರ್ಟಿಯ ಮೂಲಗಳಿಂದ ಪಡೆದ ನಿರ್ದಿಷ್ಟ ಚುನಾವಣೆಗಳ ಫಲಿತಾಂಶಗಳನ್ನು ಸಹ ಒಳಗೊಂಡಿರುತ್ತವೆ.

ಅಭ್ಯರ್ಥಿಯ ಮಾಹಿತಿ ಪ್ಯಾನೆಲ್‌ಗಳು

ಚುನಾವಣಾ ಸಂದರ್ಭದಲ್ಲಿ, ನೀವು ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಹುಡುಕಿದಾಗ ಅಭ್ಯರ್ಥಿ ಮಾಹಿತಿಯ ಪ್ಯಾನೆಲ್‌ಗಳು ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಕಾಣಿಸಬಹುದು. ಈ ಪ್ಯಾನೆಲ್‌ಗಳು, ಅಭ್ಯರ್ಥಿಗಳ ರಾಜಕೀಯ ಪಕ್ಷ ಮತ್ತು ಅವರು ಯಾವ ಸಭೆಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬಂತಹ ಮಾಹಿತಿಯನ್ನು ಹೈಲೈಟ್ ಮಾಡುತ್ತವೆ. ಕೆಲವು ಚುನಾವಣೆಗಳಿಗಾಗಿ, ನೀವು ಅರ್ಹ ರಾಜಕೀಯ ಪಕ್ಷಗಳನ್ನು ಹುಡುಕಿದಾಗ ಮಾಹಿತಿ ಪ್ಯಾನೆಲ್‌ಗಳೂ ಸಹ ಕಾಣಿಸಿಕೊಳ್ಳಬಹುದು.

ಅಭ್ಯರ್ಥಿಗಳು ಮತ್ತು ಪಕ್ಷಗಳ ಕುರಿತಾದ ಮಾಹಿತಿಯನ್ನು ಪರೀಕ್ಷಿಸಿದ, ಪಕ್ಷೇತರ, ಥರ್ಡ್-ಪಾರ್ಟಿ ಮೂಲಗಳಿಂದ ಪಡೆಯಲಾಗಿದೆ. Google Search ಮೂಲಕ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಕುರಿತು ಇನ್ನಷ್ಟು ತಿಳಿಯಲು ಲಿಂಕ್ ಸಹ ಇದೆ.

ಮಾಹಿತಿ ಪ್ಯಾನೆಲ್‌ನ ಕೆಳಗೆ, ನೀವು ಇವುಗಳನ್ನು ಸಹ ಗಮನಿಸಬಹುದು:

ಮತ ಚಲಾವಣೆಯ ಮಾಹಿತಿ ಪ್ಯಾನೆಲ್‌ಗಳು

ಚುನಾವಣಾ ಸಂದರ್ಭದಲ್ಲಿ, ನೀವು ಹೇಗೆ ಮತ ಚಲಾಯಿಸಬೇಕು ಎಂಬ ಮಾಹಿತಿಯನ್ನು ಹುಡುಕಿದಾಗ ಮತದಾನದ ಮಾಹಿತಿ ಪ್ಯಾನೆಲ್‌ಗಳು ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಕಾಣಿಸಬಹುದು. ಮತದಾನದ ಕುರಿತು ನಿರ್ದಿಷ್ಟ ಮಾಹಿತಿಯ ಬಗ್ಗೆ ಇನ್ನಷ್ಟು ತಿಳಿಯಲು ನಿಮಗೆ ಸಹಾಯ ಮಾಡುವುದಕ್ಕಾಗಿ, ಪರೀಕ್ಷಿಸಿದ, ನಿಷ್ಪಕ್ಷಪಾತ, ಥರ್ಡ್-ಪಾರ್ಟಿ ಮೂಲಗಳಿಂದ Google Search ನಲ್ಲಿ ಒಟ್ಟುಗೂಡಿಸಲಾದ ಮತದಾನದ ಕುರಿತಾದ ಮಾಹಿತಿಗೆ ಈ ಪ್ಯಾನೆಲ್‌ಗಳು ನಿಮ್ಮನ್ನು ನಿರ್ದೇಶಿಸುತ್ತವೆ ಅಥವಾ ಆ ಮೂಲಗಳಿಗೆ ನಿಮ್ಮನ್ನು ನೇರವಾಗಿ ಲಿಂಕ್ ಮಾಡುತ್ತವೆ.

ಚುನಾವಣಾ ಇಂಟಿಗ್ರಿಟಿ ಮಾಹಿತಿ ಪ್ಯಾನೆಲ್‌ಗಳು

ಚುನಾವಣೆಯ ಮುಂಚಿನ ತಿಂಗಳುಗಳಲ್ಲಿ, ನಿಮ್ಮ ದೇಶದಲ್ಲಿ ಚುನಾವಣೆ ಅಥವಾ ಮತದಾನದ ಪ್ರಕ್ರಿಯೆಗೆ ಸಂಬಂಧಿಸಿದ ಕಂಟೆಂಟ್ ಅನ್ನು ನೀವು ಹುಡುಕಿದರೆ, ಚುನಾವಣಾ ಸಮಗ್ರತೆಯ ಮಾಹಿತಿ ಪ್ಯಾನೆಲ್ ಕಾಣಿಸಿಕೊಳ್ಳಬಹುದು. ಆಯ್ದ ಚುನಾವಣೆಗಳನ್ನು ಚರ್ಚಿಸುವ ವೀಡಿಯೊಗಳ ಅಡಿಯಲ್ಲಿ ಈ ಪ್ಯಾನೆಲ್‌ಗಳು ಸಹ ಕಾಣಿಸಬಹುದು. ಚುನಾವಣಾ ಇಂಟಿಗ್ರಿಟಿ ಮಾಹಿತಿ ಪ್ಯಾನೆಲ್‌ಗಳು, ನಿರ್ದಿಷ್ಟ ಚುನಾವಣೆಯಲ್ಲಿ ಚುನಾವಣಾ ಪ್ರಕ್ರಿಯೆಯ ಇಂಟಿಗ್ರಿಟಿಯ ಕುರಿತಾದ ಮಾಹಿತಿಗೆ, ವೀಕ್ಷಕರಿಗೆ ಸಂಪರ್ಕ ಕಲ್ಪಿಸುತ್ತವೆ. ಮಾಹಿತಿ ಪ್ಯಾನೆಲ್‌ಗಳು ಪಕ್ಷೇತರ, ಥರ್ಡ್-ಪಾರ್ಟಿಯ ಮೂಲಗಳಿಗೆ ಲಿಂಕ್ ಮಾಡುತ್ತವೆ.

ಚುನಾವಣಾ ಫಲಿತಾಂಶಗಳ ಮಾಹಿತಿ ಪ್ಯಾನೆಲ್‌ಗಳು

ಆಯ್ದ ರಾಷ್ಟ್ರೀಯ ಚುನಾವಣೆಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೀವು ಹುಡುಕಿದಾಗ, ಚುನಾವಣಾ ಫಲಿತಾಂಶಗಳ ಮಾಹಿತಿ ಪ್ಯಾನೆಲ್‌ಗಳು ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಕಾಣಿಸಬಹುದು. ಆಯ್ದ ರಾಷ್ಟ್ರೀಯ ಚುನಾವಣೆಗಳನ್ನು ಚರ್ಚಿಸುವ ವೀಡಿಯೊಗಳ ಅಡಿಯಲ್ಲಿ ಈ ಪ್ಯಾನೆಲ್‌ಗಳು ಸಹ ಕಾಣಿಸಬಹುದು. ಮಾಹಿತಿ ಪ್ಯಾನೆಲ್‌ಗಳು ನಿಷ್ಪಕ್ಷಪಾತ, ಥರ್ಡ್-ಪಾರ್ಟಿ ಮೂಲಗಳಿಗೆ ಲಿಂಕ್ ಮಾಡಬಹುದು.

ಚುನಾವಣಾ ವಿಷಯಗಳ ಮಾಹಿತಿ ಪ್ಯಾನೆಲ್‌ಗಳು

ಚುನಾವಣಾ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಪ್ಯಾನೆಲ್‌ಗಳು ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಅಥವಾ ಸಂಬಂಧಿತ ವೀಡಿಯೊಗಳ ಅಡಿಯಲ್ಲಿ ಕಾಣಿಸಿಕೊಳ್ಳಬಹುದು. ಈ ಪ್ಯಾನೆಲ್‌ಗಳು ರಾಷ್ಟ್ರೀಯ ಚುನಾವಣಾ ಆಯೋಗದಂತಹ ನಿಷ್ಪಕ್ಷಪಾತ, ಥರ್ಡ್-ಪಾರ್ಟಿ ಮೂಲಗಳ ವಿಶ್ವಾಸಾರ್ಹ ಮಾಹಿತಿಗೆ ಲಿಂಕ್ ಮಾಡುತ್ತವೆ. ಮಾಹಿತಿ ಪ್ಯಾನೆಲ್‌ಗಳಲ್ಲಿ ವಿಷಯದ ಸಂದರ್ಭದ ಕುರಿತು ಇನ್ನಷ್ಟು ತಿಳಿಯಿರಿ.

FAQ ಗಳು

ಅಭ್ಯರ್ಥಿಯ ಮಾಹಿತಿ ಪ್ಯಾನೆಲ್‌ಗಳು

ಅಭ್ಯರ್ಥಿಯ ಮಾಹಿತಿ ಪ್ಯಾನೆಲ್‌ಗಳಿಗೆ ಮಾಹಿತಿ ಎಲ್ಲಿಂದ ಬರುತ್ತವೆ?

ಪಕ್ಷೇತರ, ಥರ್ಡ್ ಪಾರ್ಟಿ ಡೇಟಾ ಪಾಲುದಾರರಿಂದ ಮಾಹಿತಿಯನ್ನು ಪಡೆಯಲಾಗಿದೆ. ಡೇಟಾ ಪಾಲುದಾರರು ದೇಶ/ಪ್ರದೇಶ ಮತ್ತು ಚುನಾವಣೆಗೆ ಅನುಗುಣವಾಗಿ ಬದಲಾಗಬಹುದು.

ಯಾವ ಅಭ್ಯರ್ಥಿಗಳು ಮಾಹಿತಿಯ ಪ್ಯಾನೆಲ್‌ಗಳನ್ನು ಪಡೆಯುತ್ತಾರೆ?

ಪಕ್ಷೇತರ ಥರ್ಡ್-ಪಾರ್ಟಿ ಪಾಲುದಾರರಿಂದ ಪಡೆದ ಮಾಹಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಮಾಹಿತಿ ಪ್ಯಾನೆಲ್‌ಗೆ ಅರ್ಹರಾಗಿರುತ್ತಾರೆ. ಕೆಲವು ಚುನಾವಣೆಗಳಿಗಾಗಿ, ಕನಿಷ್ಠ ಒಬ್ಬ ಅರ್ಹ ಅಭ್ಯರ್ಥಿಯನ್ನು ಹೊಂದಿರುವ ರಾಜಕೀಯ ಪಕ್ಷಗಳೂ ಸಹ ಪಕ್ಷೇತರ, ಥರ್ಡ್-ಪಾರ್ಟಿ ಪಾಲುದಾರರಿಂದ ಮಾಹಿತಿಯ ಪ್ಯಾನೆಲ್ ಅನ್ನು ಸ್ವೀಕರಿಸಲು ಅರ್ಹವಾಗಿರುತ್ತವೆ.

ನಾನು ಅಭ್ಯರ್ಥಿಗಾಗಿ ಹುಡುಕಿದಾಗ, ಮಾಹಿತಿ ಪ್ಯಾನೆಲ್ ಇರಲಿಲ್ಲ. ಏಕೆ?

ನಿಮ್ಮ ಹುಡುಕಾಟದ ಪದಗಳನ್ನು ನೀವು ಬದಲಾಯಿಸಬೇಕಾಗಬಹುದು. ನಿಮ್ಮ ಹುಡುಕಾಟದ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳಲು ಮಾಹಿತಿ ಪ್ಯಾನೆಲ್‌ಗಳು ಮತ್ತು ಪಿನ್ ಮಾಡಿದ ಚಾನಲ್‌ಗಳಿಗಾಗಿ ಅಭ್ಯರ್ಥಿಯ ನಿಖರವಾದ ಸಂಪೂರ್ಣ ಹೆಸರನ್ನು ನಮೂದಿಸಿ. 

ನೆನಪಿನಲ್ಲಿಡಿ:

  • ಯಾವ ಅಭ್ಯರ್ಥಿಗಳು ಅಥವಾ ಪಕ್ಷಗಳಿಗೆ ಪ್ಯಾನೆಲ್ ಅನ್ನು ಕಾಣಿಸಬೇಕೆಂದು YouTube ನೇರವಾಗಿ ನಿರ್ಧರಿಸುವುದಿಲ್ಲ. ಬದಲಿಗೆ, ನಾವು ಅಭ್ಯರ್ಥಿ ಮತ್ತು ಪಕ್ಷದ ಮಾಹಿತಿಗಾಗಿ ಪರೀಕ್ಷಿಸಿದ ಥರ್ಡ್-ಪಾರ್ಟಿಯ ಮೂಲಗಳನ್ನು ಅವಲಂಬಿಸುತ್ತೇವೆ.
  • ಅಭ್ಯರ್ಥಿಯು YouTube ಚಾನಲ್ ಅನ್ನು ಹೊಂದಿಲ್ಲದಿದ್ದರೆ, ಅವರನ್ನು ಈಗಲೂ ಮಾಹಿತಿ ಪ್ಯಾನೆಲ್‌ನಲ್ಲಿ ಫೀಚರ್ ಮಾಡಲಾಗುತ್ತದೆ. 
  • YouTube ನಿಯಮಾವಳಿ ಉಲ್ಲಂಘನೆಯ ಕಾರಣದಿಂದ ಅಭ್ಯರ್ಥಿಯ ಅಥವಾ ಪಕ್ಷದ ಚಾನಲ್ ಅನ್ನು ತೆಗೆದುಹಾಕಿದ್ದರೆ, ಅವರ ಚಾನಲ್ ಹುಡುಕಾಟ ಫಲಿತಾಂಶಗಳಲ್ಲಿ ಕಾಣಿಸದಿರಬಹುದು.
  • ಅಭ್ಯರ್ಥಿಯ ಮಾಹಿತಿ ಪ್ಯಾನೆಲ್‌ಗಳು YouTube ಮೊಬೈಲ್ ಆ್ಯಪ್‌ನಲ್ಲಿ (Android ಮತ್ತು iOS) ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಮಾತ್ರ ಲಭ್ಯವಿರುತ್ತವೆ. 

ಮತ ಚಲಾವಣೆಯ ಮಾಹಿತಿ ಪ್ಯಾನೆಲ್‌ಗಳು

ಅಭ್ಯರ್ಥಿಯ ಮಾಹಿತಿ ಪ್ಯಾನೆಲ್‌ಗಳಿಗೆ ಮತದಾನದ ಮಾಹಿತಿಯು ಎಲ್ಲಿಂದ ಬರುತ್ತವೆ?

YouTube ನಲ್ಲಿ ಮತದಾನದ ಮಾಹಿತಿ ಪ್ಯಾನೆಲ್‌ಗಳು Google ನ "ಮತದಾನ ಮಾಡುವುದು ಹೇಗೆ" ಫೀಚರ್‌ಗಳಿಗೆ ಲಿಂಕ್ ಮಾಡುತ್ತವೆ. Google Search ನಲ್ಲಿ ಪಕ್ಷೇತರ, ಥರ್ಡ್-ಪಾರ್ಟಿ ಡೇಟಾ ಪಾಲುದಾರರಿಂದ ಮಾಹಿತಿಯನ್ನು ಪಡೆಯಲಾಗಿದೆ. ಈ ಡೇಟಾ ಪಾಲುದಾರರು ದೇಶ/ಪ್ರದೇಶ ಮತ್ತು ಚುನಾವಣೆಯ ಪ್ರಕಾರ ಬದಲಾಗಬಹುದು.

ನಾನು ಮತದಾನದ ಮಾಹಿತಿಗಾಗಿ ಹುಡುಕಿದಾಗ, ಯಾವುದೇ ಮಾಹಿತಿ ಪ್ಯಾನೆಲ್ ಇರಲಿಲ್ಲ. ಏಕೆ?

ನಿಮ್ಮ ಹುಡುಕಾಟದ ಪದಗಳನ್ನು ನೀವು ಬದಲಾಯಿಸಬೇಕಾಗಬಹುದು. "ಮತದಾನ ಮಾಡುವುದು ಹೇಗೆ" ಎಂದು ಹುಡುಕಲು ಪ್ರಯತ್ನಿಸಿ.

ನೆನಪಿನಲ್ಲಿಡಿ, ಮತದಾನದ ಮಾಹಿತಿ ಪ್ಯಾನೆಲ್‌ಗಳು ಇಲ್ಲಿ ಮಾತ್ರ ಲಭ್ಯವಿವೆ:

  • YouTube ಮೊಬೈಲ್ ಆ್ಯಪ್‌ (Android ಮತ್ತು iOS)
  • ನಿಮ್ಮ ಕಂಪ್ಯೂಟರ್

ಚುನಾವಣಾ ಸಮಗ್ರತೆಯ ಮಾಹಿತಿ ಪ್ಯಾನೆಲ್‌ಗಳು 

ಚುನಾವಣಾ ಸಮಗ್ರತೆಯ ಮಾಹಿತಿ ಪ್ಯಾನೆಲ್‌ಗಳಿಗೆ ಮಾಹಿತಿ ಎಲ್ಲಿಂದ ಬರುತ್ತವೆ?

ಮಾಹಿತಿಯನ್ನು ಸ್ವತಂತ್ರ ಥರ್ಡ್-ಪಾರ್ಟಿ ಮೂಲಗಳಿಂದ ಪಡೆಯಲಾಗಿದೆ. ಡೇಟಾ ಪಾಲುದಾರರು ದೇಶ/ಪ್ರದೇಶ ಮತ್ತು ಚುನಾವಣೆಗೆ ಅನುಗುಣವಾಗಿ ಬದಲಾಗಬಹುದು.

ನಾನು ಚುನಾವಣೆಗಳ ಕುರಿತ ವೀಡಿಯೊಗಳನ್ನು ಹುಡುಕಿದಾಗ ಅಥವಾ ವೀಕ್ಷಿಸಿದಾಗ, ಯಾವುದೇ ಮಾಹಿತಿ ಪ್ಯಾನೆಲ್ ಇರಲಿಲ್ಲ. ಏಕೆ?

ಚುನಾವಣಾ ಸಮಗ್ರತೆಯ ಮಾಹಿತಿ ಪ್ಯಾನೆಲ್‌ಗಳು ಸೂಕ್ತವಾದ ದೇಶಗಳು/ಪ್ರದೇಶಗಳಲ್ಲಿನ ಆಯ್ದ ಚುನಾವಣೆಗಳಿಗೆ ಸಂಬಂಧಿಸಿದ ಹುಡುಕಾಟಗಳು ಅಥವಾ ವೀಡಿಯೊಗಳಲ್ಲಿ ಮಾತ್ರ ಕಾಣಿಸುತ್ತವೆ. ಹುಡುಕಾಟದಲ್ಲಿ, ಮಾಹಿತಿ ಪ್ಯಾನೆಲ್ ಕಾಣಿಸಲು ನಿಮ್ಮ ಹುಡುಕಾಟ ಪದಗಳನ್ನು ನೀವು ಹೆಚ್ಚು ನಿರ್ದಿಷ್ಟವಾಗಿ ಮಾಡಬೇಕಾಗಬಹುದು.

ಚುನಾವಣಾ ಫಲಿತಾಂಶಗಳ ಮಾಹಿತಿ ಪ್ಯಾನೆಲ್‌ಗಳು

ಚುನಾವಣಾ ಫಲಿತಾಂಶಗಳ ಮಾಹಿತಿ ಪ್ಯಾನೆಲ್‌ಗಳಿಗೆ ಮಾಹಿತಿ ಎಲ್ಲಿಂದ ಬರುತ್ತವೆ?

ಮಾಹಿತಿಯನ್ನು ಸ್ವತಂತ್ರ ಥರ್ಡ್-ಪಾರ್ಟಿ ಮೂಲಗಳಿಂದ ಪಡೆಯಲಾಗಿದೆ. ಡೇಟಾ ಪಾಲುದಾರರು ದೇಶ/ಪ್ರದೇಶ ಮತ್ತು ಚುನಾವಣೆಗೆ ಅನುಗುಣವಾಗಿ ಬದಲಾಗಬಹುದು.

ನಾನು ಚುನಾವಣೆಗಳ ಕುರಿತ ಫಲಿತಾಂಶಗಳನ್ನು ಹುಡುಕಿದಾಗ ಅಥವಾ ವೀಕ್ಷಿಸಿದಾಗ, ಯಾವುದೇ ಮಾಹಿತಿ ಪ್ಯಾನೆಲ್ ಇರಲಿಲ್ಲ. ಏಕೆ?

ಚುನಾವಣಾ ಫಲಿತಾಂಶಗಳ ಮಾಹಿತಿ ಪ್ಯಾನೆಲ್‌ಗಳು ಸೂಕ್ತವಾದ ದೇಶಗಳು/ಪ್ರದೇಶಗಳಲ್ಲಿನ ಆಯ್ದ ರಾಷ್ಟ್ರೀಯ ಚುನಾವಣೆಗಳಿಗೆ ಸಂಬಂಧಿಸಿದ ಹುಡುಕಾಟಗಳು ಅಥವಾ ವೀಡಿಯೊಗಳಲ್ಲಿ ಮಾತ್ರ ಕಾಣಿಸುತ್ತವೆ. ಹುಡುಕಾಟದಲ್ಲಿ, ಮಾಹಿತಿ ಪ್ಯಾನೆಲ್ ಕಾಣಿಸಲು ನಿಮ್ಮ ಹುಡುಕಾಟ ಪದಗಳನ್ನು ನೀವು ಹೆಚ್ಚು ನಿರ್ದಿಷ್ಟವಾಗಿ ಮಾಡಬೇಕಾಗಬಹುದು. ಚುನಾವಣೆಗಳು ಮುಗಿದ ನಂತರ ಮತ್ತು ಫಲಿತಾಂಶಗಳನ್ನು ಪ್ರಮಾಣೀಕರಿಸಿದ ನಂತರ, ಈ ಪ್ಯಾನೆಲ್‌ಗಳು ಕಾಣಿಸಿಕೊಳ್ಳುವುದಿಲ್ಲ.

ನೆನಪಿನಲ್ಲಿಡಿ, ಚುನಾವಣಾ ಫಲಿತಾಂಶಗಳ ಮಾಹಿತಿ ಫಲಕಗಳು ಕೆಲವು ದೇಶಗಳು/ಪ್ರದೇಶಗಳಲ್ಲಿ ಮತ್ತು ಇವುಗಳಲ್ಲಿ ಮಾತ್ರ ಲಭ್ಯವಿವೆ:

  • YouTube ಮೊಬೈಲ್ ಆ್ಯಪ್‌ (Android ಮತ್ತು iOS)
  • ನಿಮ್ಮ ಕಂಪ್ಯೂಟರ್

ಚುನಾವಣಾ ವಿಷಯಗಳ ಮಾಹಿತಿ ಪ್ಯಾನೆಲ್‌ಗಳು

ಇತರ ಯಾವ ಚುನಾವಣಾ ವಿಷಯಗಳು ಮಾಹಿತಿ ಪ್ಯಾನೆಲ್‌ಗಳನ್ನು ತೋರಿಸುತ್ತವೆ?

ತಪ್ಪು ಮಾಹಿತಿಗೆ ತುತ್ತಾಗಬಹುದಾದ ಚುನಾವಣಾ ವಿಷಯಗಳಿಗಾಗಿ ಮಾಹಿತಿ ಪ್ಯಾನೆಲ್‌ಗಳು ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಅಥವಾ ಸಂಬಂಧಿತ ವೀಡಿಯೊಗಳ ಅಡಿಯಲ್ಲಿ ಕಾಣಿಸಿಕೊಳ್ಳಬಹುದು. ನೆನಪಿಡಿ, ಚುನಾವಣಾ ವಿಷಯಗಳ ಕುರಿತು ಹೆಚ್ಚಿನ ಸಂದರ್ಭವನ್ನು ತೋರಿಸುವ ಮಾಹಿತಿ ಪ್ಯಾನೆಲ್‌ಗಳು ಸೀಮಿತ ದೇಶಗಳು/ಪ್ರದೇಶಗಳಲ್ಲಿ ನಿರ್ದಿಷ್ಟ ವಿಷಯಗಳಿಗಾಗಿ ಮಾತ್ರ ಲಭ್ಯವಿವೆ, ಉದಾಹರಣೆಗೆ:

  • ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಂಚೆಯ ಮೂಲಕ ಮತದಾನ ಮಾಡುವುದು
  • ಬ್ರಝೀಲ್‌ನಲ್ಲಿ ಎಲೆಕ್ಟ್ರಾನಿಕ್ ಮತದಾನ
  • ಭಾರತದಲ್ಲಿ ಎಲೆಕ್ಟ್ರಾನಿಕ್ ಮತದಾನ
 ಮಾಹಿತಿ ಪ್ಯಾನೆಲ್‌ಗಳಲ್ಲಿ ವಿಷಯದ ಸಂದರ್ಭದ ಕುರಿತು ಇನ್ನಷ್ಟು ತಿಳಿಯಿರಿ.

ಫೀಡ್‌ಬ್ಯಾಕ್

ಚುನಾವಣಾ ಮಾಹಿತಿಗಾಗಿ ನಾವು ಸ್ವತಂತ್ರ, ಥರ್ಡ್-ಪಾರ್ಟಿಯ ಮೂಲಗಳನ್ನು ಅವಲಂಬಿಸಿದ್ದೇವೆ. ಮೇಲೆ ವಿವರಿಸಿದ ಯಾವುದೇ ಫೀಚರ್‌ಗಳಿಗೆ ಸಂಬಂಧಿಸಿದ ತಪ್ಪಾದ ಅಥವಾ ಬಿಟ್ಟುಹೋದ ಮಾಹಿತಿಯನ್ನು ನೀವು ಗಮನಿಸಿದರೆ, ನಮಗೆ ಪ್ರತಿಕ್ರಿಯೆಯನ್ನು ಕಳುಹಿಸಿ:

  1. ಮಾಹಿತಿ ಪ್ಯಾನೆಲ್‌ನ ಮೇಲಿನ ಬಲ ಮೂಲೆಯಲ್ಲಿ, ಮೆನು ಆಯ್ಕೆಮಾಡಿ.
  2. ಪ್ರತಿಕ್ರಿಯೆ ಕಳುಹಿಸಿ ಆಯ್ಕೆಮಾಡಿ. ವಿಂಡೋ ತೆರೆಯುತ್ತದೆ, ಇಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ನೀವು ಬರೆಯಬಹುದಾಗಿದೆ.
  3. ನಿಮ್ಮ ಪ್ರತಿಕ್ರಿಯೆಯನ್ನು ಬರೆಯಿರಿ. ಯಾವ ಅಭ್ಯರ್ಥಿ ಅಥವಾ ಪಕ್ಷವು ಬಿಟ್ಟುಹೋಗಿದೆ ಅಥವಾ ತಪ್ಪಾದ ಮಾಹಿತಿಯನ್ನು ಹೊಂದಿದೆ ಎಂಬಂತಹ ನಿರ್ದಿಷ್ಟ ವಿವರಗಳನ್ನು ಸೇರಿಸಿ.
  4. ನೀವು ಸ್ಕ್ರೀನ್‌ಶಾಟ್ ಸೇರಿಸಲು ಬಯಸುತ್ತೀರಾ ಎಂಬುದನ್ನು ಆರಿಸಿ. ನೀವು ಸ್ಕ್ರೀನ್‌ನ ಮೇಲೆ ಯಾವುದೇ ಮಾಹಿತಿಯನ್ನು ಹೈಲೈಟ್ ಮಾಡಬಹುದು ಅಥವಾ ತೋರಿಸುತ್ತಿರುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಬಹುದು. ನೀವು ಸ್ಕ್ರೀನ್‌ಶಾಟ್ ಅನ್ನು ಸೇರಿಸಲು ನಾವು ಪ್ರಬಲವಾಗಿ ಶಿಫಾರಸು ಮಾಡುತ್ತೇವೆ.
  5. ಕಳುಹಿಸಿ ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2792853311625671803
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false