ಖರೀದಿಸಿದ ಚಲನಚಿತ್ರಗಳು & ಟಿವಿ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಿ

YouTube ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮದಂತಹ ಖರೀದಿಗಳನ್ನು ಇದೀಗ YouTube ಆ್ಯಪ್ ಬಳಸಿಕೊಂಡು ಆಫ್‌ಲೈನ್‌ನಲ್ಲಿಯೇ ವೀಕ್ಷಿಸಬಹುದಾಗಿದೆ. ನೀವು ಆಸಕ್ತಿಯನ್ನು ಹೊಂದಿರುವ ಕಂಟೆಂಟ್ ಅನ್ನು ನೀವು ಬಾಡಿಗೆಗೆ ಪಡೆದ ಅಥವಾ ಖರೀದಿಸಿದ ನಂತರ, ಅದನ್ನು iOS ಅಥವಾ Android ಸಾಧನದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ಯಾವಾಗ ಬೇಕಾದರೂ ವೀಕ್ಷಿಸಬಹುದು. ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸಲು ನಿಮ್ಮ ಸಾಧನವು ಇಂಟರ್ನೆಟ್‌ಗೆ ಕನೆಕ್ಟ್ ಆಗಬೇಕಾಗಿಲ್ಲ.

ನಿಮ್ಮ ಖರೀದಿಯನ್ನು ಡೌನ್‌ಲೋಡ್ ಮಾಡಲು, ನೀವು ಖರೀದಿಸಲು ಬಳಸಿದ್ದ ಅದೇ Google ಖಾತೆಯನ್ನು ಬಳಸಿಕೊಂಡು ನಿಮ್ಮ YouTube ಆ್ಯಪ್‌ಗೆ ಸೈನ್ ಇನ್ ಮಾಡಬೇಕಾಗುತ್ತದೆ.

ನೀವು ಖರೀದಿಸಿದ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು, YouTube Premium ಸಬ್‌ಸ್ಕ್ರೈಬರ್ ಆಗಿರಬೇಕಾಗಿಲ್ಲ. iOS 11 ಅಥವಾ ಇತ್ತೀಚಿನ ಆವೃತ್ತಿ ಮತ್ತು Android 16.23 ಅಥವಾ ಇತ್ತೀಚಿನ ಆವೃತ್ತಿಯಲ್ಲಿ ರನ್ ಆಗುತ್ತಿರುವ ಬೆಂಬಲಿತ ಸಾಧನಗಳಲ್ಲಿ ಎಲ್ಲಾ ಬಳಕೆದಾರರಿಗೆ ಈ ಫೀಚರ್ ಲಭ್ಯವಿದೆ.

ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಎಪಿಸೋಡ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮದ ಎಪಿಸೋಡ್‌ಗಳನ್ನು ಸುಮಾರು ಐದು ಸಾಧನಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬಾಡಿಗೆಗೆ ಪಡೆದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮದ ಎಪಿಸೋಡ್‌ಗಳನ್ನು ಒಂದು ಬಾರಿಗೆ ಒಂದು ಸಾಧನದಲ್ಲಿ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಾಡಿಗೆಗೆ ಪಡೆದ ವೀಡಿಯೊವನ್ನು ಬೇರೊಂದು ಸಾಧನದಲ್ಲಿ ಡೌನ್‌ಲೋಡ್ ಮಾಡಬೇಕಾದರೆ, ನೀವು ಅದನ್ನು ಮೊದಲ ಸಾಧನದಿಂದ ಅದನ್ನು ತೆಗೆದುಹಾಕಬೇಕಾಗುತ್ತದೆ ತದನಂತರ, ನಿಮ್ಮ ಆದ್ಯತೆಯ ಸಾಧನದಲ್ಲಿ ಅದನ್ನು ಮತ್ತೆ ಡೌನ್‌ಲೋಡ್ ಮಾಡಬೇಕಾಗುತ್ತದೆ.

ಗಮನಿಸಿ: ನೀವು YouTube ಆ್ಯಪ್ ಮತ್ತು Google Play ಚಲನಚಿತ್ರಗಳು ಮತ್ತು ಟಿವಿ ಆ್ಯಪ್ ಎರಡರಲ್ಲಿಯೂ, ಒಂದೇ ಸಾಧನದಲ್ಲಿ ಒಂದೇ ಬಾರಿಗೆ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್ ಅನ್ನು ಡೌನ್‌ಲೋಡ್ ಮಾಡಲಾಗುವುದಿಲ್ಲ. ನೀವು ಒಂದರಲ್ಲಿ ಅದನ್ನು ಡೌನ್‌ಲೋಡ್ ಮಾಡಬೇಕಾದರೆ ಮತ್ತೊಂದರಿಂದ ಅದನ್ನು ತೆಗೆದುಹಾಕಬೇಕಾಗುತ್ತದೆ. YouTube ನಲ್ಲಿ ಡೌನ್‌ಲೋಡ್ ಅನ್ನು ತೆಗೆದುಹಾಕುವುದು ಹೇಗೆ ಎಂಬುದರ ಕುರಿತು ನೀವು ಕೆಳಗೆ ಓದಿ ತಿಳಿದುಕೊಳ್ಳಬಹುದು. Google Play ಚಲನಚಿತ್ರಗಳು ಮತ್ತು ಟಿವಿ ಆ್ಯಪ್‌ನಲ್ಲಿ ಇದನ್ನು ಹೇಗೆ ಮಾಡುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಈ ಲೇಖನದಲ್ಲಿ ಕಾಣಬಹುದು.

ಆಫ್‌ಲೈನ್ ವೀಕ್ಷಣೆಗಾಗಿ ಬಾಡಿಗೆಗೆ ಪಡೆದ ಅಥವಾ ಖರೀದಿಸಿದ ವೀಡಿಯೊವನ್ನು ಡೌನ್‌ಲೋಡ್ ಮಾಡಲು, ಈ ಹಂತಗಳನ್ನು ಅನುಸರಿಸಿ:

  1. ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಅಥವಾ ಸ್ಮಾರ್ಟ್ ಟಿವಿಯಲ್ಲಿ ನೀವು ಬಯಸುವ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್‌ಗಳನ್ನು ಖರೀದಿಸಿ ಅಥವಾ ಬಾಡಿಗೆಗೆ ಪಡೆಯಿರಿ.
  2. ನೀವು ಕಂಟೆಂಟ್ ಅನ್ನು ಬಾಡಿಗೆಗೆ ಪಡೆಯಲು ಅಥವಾ ಖರೀದಿಸಲು ಬಳಸಿದ ಅದೇ ಖಾತೆಯನ್ನು ಬಳಸಿಕೊಂಡು, iOS ಅಥವಾ Android ಸಾಧನಗಳಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  3. ಲೈಬ್ರರಿ  ಟ್ಯಾಬ್ ಮೇಲೆ ಟ್ಯಾಪ್ ಮಾಡಿ.
  4. ನಿಮ್ಮ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳು ಮೇಲೆ ಟ್ಯಾಪ್ ಮಾಡಿ. ನೀವು ಖರೀದಿಸಿದ ಅಥವಾ ಬಾಡಿಗೆಗೆ ಪಡೆದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮದ ಎಪಿಸೋಡ್‌ಗಳನ್ನು ಇದೀಗ ಕಾಣಬಹುದು.
  5. ಆಫ್‌ಲೈನ್ ವೀಕ್ಷಣೆಗಾಗಿ ನೀವು ಡೌನ್‌ಲೋಡ್ ಮಾಡಲು ಬಯಸುವ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಮೇಲೆ ಟ್ಯಾಪ್ ಮಾಡಿ.
  6. ಡೌನ್‌ಲೋಡ್ ಟ್ಯಾಪ್ ಮಾಡಿ.
  7. ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ. ನೀವು ಖರೀದಿಸಿದ ಗುಣಮಟ್ಟ ಮತ್ತು ನೀವು ಡೌನ್‌ಲೋಡ್ ಮಾಡಲು ಬಳಸುತ್ತಿರುವ ಸಾಧನದ ಬೆಂಬಲದ ಗುಣಮಟ್ಟವನ್ನು ಅವಲಂಬಿಸಿ, ವಿಭಿನ್ನ ವೀಡಿಯೊ ಗುಣಮಟ್ಟಗಳು ಲಭ್ಯವಿರುತ್ತವೆ. UHD ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಲಾಗುವುದಿಲ್ಲ.
  8. ಕೆಲವು ಹಾಡುಗಳ ಆಡಿಯೋ ಟ್ರ್ಯಾಕ್‌ಗಳು ಹಲವಾರು ಭಾಷೆಗಳಲ್ಲಿ ಲಭ್ಯವಿರುತ್ತವೆ. ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್‌ಗಾಗಿ ಆದ್ಯತೆಯ ಆಡಿಯೋ ಟ್ರ್ಯಾಕ್ ಅನ್ನು ಆಯ್ಕೆಮಾಡಿ. ಗಮನಿಸಿ: ನಿರ್ದಿಷ್ಟ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್‌ಗಾಗಿ ಲಭ್ಯವಿರುವ ಎಲ್ಲಾ ಉಪಶೀರ್ಷಿಕೆಗಳು ಆಫ್‌ಲೈನ್ ವೀಕ್ಷಣೆಗೂ ಲಭ್ಯವಿರುತ್ತವೆ.
  9. ಡೌನ್‌ಲೋಡ್ ಪೂರ್ಣಗೊಂಡ ಬಳಿಕ, ವೀಡಿಯೊ ಪ್ಲೇಯರ್ ಕೆಳಗೆ ”ಡೌನ್‌ಲೋಡ್ ಮಾಡಲಾಗಿದೆ” ಐಕಾನ್  ಕಾಣಿಸುತ್ತದೆ.

ನೀವು ಒಂದೇ ಕಾರ್ಯಕ್ರಮದ ಹಲವಾರು ಎಪಿಸೋಡ್‌ಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ಪ್ರತಿಯೊಂದು ಎಪಿಸೋಡ್‌ಗೂ ಇದೇ ಹಂತಗಳನ್ನು ಪುನರಾವರ್ತಿಸಿ.

ಕೆಲವು ಮೊಬೈಲ್ ಸಾಧನಗಳಲ್ಲಿ, ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿರುವಾಗ ಮಾತ್ರ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಮೊಬೈಲ್ ನೆಟ್‌ವರ್ಕ್ ಮೂಲಕ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು:

  1. ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
  2. ಸೆಟ್ಟಿಂಗ್‌ಗಳು ಟ್ಯಾಪ್ ಮಾಡಿ.
  3. "ಹಿನ್ನೆಲೆ & ಡೌನ್‌ಲೋಡ್‌ಗಳು" ಅಡಿಯಲ್ಲಿ, ವೈ-ಫೈ ಮೂಲಕ ಡೌನ್‌ಲೋಡ್ ಮಾಡಿ ಆಫ್ ಮಾಡಿ.

ಡೌನ್‌ಲೋಡ್ ಮಾಡಲಾದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಎಪಿಸೋಡ್‌ಗಳನ್ನು ಆ್ಯಕ್ಸೆಸ್ ಮಾಡುವುದು ಹೇಗೆ

ಲೈಬ್ರರಿ  ಟ್ಯಾಬ್ ನಂತರ ಡೌನ್‌ಲೋಡ್‌ಗಳು  ಟ್ಯಾಪ್ ಮಾಡುವ ಮೂಲಕ YouTube ಆ್ಯಪ್‌ನಲ್ಲಿ ನಿಮ್ಮ ಡೌನ್‌ಲೋಡ್ ಮಾಡಲಾದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮದ ಎಪಿಸೋಡ್‌ಗಳನ್ನು ನೀವು ಆ್ಯಕ್ಸೆಸ್ ಮಾಡಬಹುದು.
ಬಾಡಿಗೆಗಳಿಗಾಗಿ: ನಿಮ್ಮ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್‌ಗಳು ಬಾಡಿಗೆ ಅವಧಿಯಲ್ಲಿ ಲಭ್ಯವಿರುತ್ತವೆ. ನೀವು ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್ ಅನ್ನು ಬಾಡಿಗೆಗೆ ಪಡೆದ ನಂತರ, ನೀವು ಅದನ್ನು ವೀಕ್ಷಿಸುವುದಕ್ಕೆ ಪ್ರಾರಂಭಿಸಲು 30 ದಿನಗಳ ಕಾಲಾವಕಾಶವಿರುತ್ತದೆ. ಚಲನಚಿತ್ರ ವೀಕ್ಷಣೆಯನ್ನು ಪ್ರಾರಂಭಿಸಿದ ಬಳಿಕ, ನಿಮ್ಮ ಬಾಡಿಗೆಗೆ ಪಡೆದ ಅವಧಿಯು ಕೊನೆಯಾಗುವವರೆಗೂ ನಿಮಗೆ ಎಷ್ಟು ಬಾರಿ ಬೇಕೋ ಅಷ್ಟೂ ಬಾರಿ ವೀಕ್ಷಿಸಬಹುದು. ಬಾಡಿಗೆ ಅವಧಿಗಳು ಸಾಮಾನ್ಯವಾಗಿ 48 ಗಂಟೆಗಳಾಗಿರುತ್ತವೆ, ಆದರೆ ಬಾಡಿಗೆಗೆ ಚೆಕ್‌ಔಟ್‌ನ ಅಂತಿಮ ಪುಟವು ನಿಮ್ಮ ಬಾಡಿಗೆ ಅವಧಿಗೆ ಸಂಬಂಧಿಸಿದ ಮಾಹಿತಿಯನ್ನು ಗಮನಿಸಬಹುದು. ಹೆಚ್ಚಿನ ಮಾಹಿತಿಗಾಗಿ, ನಮ್ಮ ಬಳಕೆಯ ನಿಯಮಗಳು ಮೇಲೆ ಕಣ್ಣಾಡಿಸಿ.

ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಎಪಿಸೋಡ್‌ಗಳನ್ನು ಡೌನ್‌ಲೋಡ್‌ಗಳು ವಿಭಾಗದಿಂದ ಹೇಗೆ ತೆಗೆದುಹಾಕುವುದು

ನಿಮ್ಮ ಡೌನ್‌ಲೋಡ್‌ಗಳು ವಿಭಾಗದಿಂದ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್ ಅನ್ನು ತೆಗೆದುಹಾಕಲು:
  1. YouTube ಆ್ಯಪ್‌ನಲ್ಲಿ, ಲೈಬ್ರರಿ  ಟ್ಯಾಬ್ ಮೇಲೆ ಟ್ಯಾಪ್ ಮಾಡಿ.
  2. ಡೌನ್‌ಲೋಡ್‌ಗಳು ಟ್ಯಾಪ್ ಮಾಡಿ.
  3. ನೀವು ತೆಗೆದುಹಾಕಲು ಬಯಸುವ ಡೌನ್‌ಲೋಡ್ ಮಾಡಿದ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್ ಅನ್ನು ಹುಡುಕಿ.
  4. ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಎಪಿಸೋಡ್ ಪಕ್ಕದಲ್ಲಿ ಕಾಣಿಸುವ ಮೆನು '' ಟ್ಯಾಪ್ ಮಾಡಿ.
  5. ಡೌನ್‌ಲೋಡ್‌ಗಳಿಂದ ಅಳಿಸಿ ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8551251102169857154
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false